New CREST 2026 — Creative Entrance & Scholarship Test | I PUC 2027 Admissions Open | Top 100 Students Eligible for Scholarships Apply Now

ಜೆ.ಇ.ಇ ( ಬಿ.ಆರ್ಕ್ ) ಪರೀಕ್ಷೆಯಲ್ಲಿ ಹೆಚ್. ಕೆ. ಎಸ್.ನ ವಿದ್ಯಾರ್ಥಿಗಳ ಅದ್ಭುತ ಸಾಧನೆ.

ಜೆ.ಇ.ಇ ( ಬಿ.ಆರ್ಕ್ )  ಪರೀಕ್ಷೆಯಲ್ಲಿ ಹೆಚ್. ಕೆ. ಎಸ್.ನ ವಿದ್ಯಾರ್ಥಿಗಳ  ಅದ್ಭುತ ಸಾಧನೆ.

ಜೆ.ಇ.ಇ (ಬಿ.ಆರ್ಕ್ ) ವಿದ್ಯಾರ್ಥಿಗಳಿಗೆ ಜನವರಿಯಿಂದ ಏಪ್ರಿಲ್ ವರೆಗೆ ನಡೆದ ಜೆ.ಇ.ಇ (ಬಿ. ಆರ್ಕ್ ) ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್. ಕೆ. ಎಸ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಅದ್ಭುತ ಸಾಧನೆ ಗೈದಿದ್ದಾರೆ .

ಪ್ರಸ್ತುತ ಬಹುಬೇಡಿಕೆಯನ್ನು ಹೊಂದಿರುವ ರಾಷ್ಟ್ರದ ಅತ್ಯುನ್ನತ ಸಂಸ್ಥೆಯಾದ ಐ. ಐ. ಟಿ ಮತ್ತು ಇತರ ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ ಬಿ ಆರ್ಕ್ ಕೋರ್ಸಿಗೆ ಸೇರಲು ನಡೆಯುವ ಈ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಗೆ ಹೆಚ್. ಕೆ. ಎಸ್ ವಿದ್ಯಾ ಸಂಸ್ಥೆಯು ಅತ್ಯುತ್ತಮ ತರಬೇತಿ ನೀಡಲಾಗುತ್ತಿದ್ದು, JEE (B. Arch)ಗೆ ತರಬೇತಿ ನೀಡುತ್ತಿರುವ ಹಾಸನ ಜಿಲ್ಲೆಯ ಏಕೈಕ ಸಂಸ್ಥೆಯಾಗಿದೆ.

ತಮ್ಮ ಮೊದಲ ಪ್ರಯತ್ನದಲ್ಲೇ ರಾಷ್ಟ್ರ ಮಟ್ಟದಲ್ಲಿ ತ್ರಿಶ್ಲಾ ಗಾಂಧಿ 423 ನೇ ಕೆಟಗರಿ ರ‍್ಯಾಂಕ್, ಚಿನ್ಮಯಿ ಆರ್ 519ನೇ ಕೆಟಗರಿ ರ‍್ಯಾಂಕ್, ಚೇತನ್ ಗೌಡ ಎನ್ ಎಸ್ 867 ನೇ ಕೆಟಗರಿ ರ‍್ಯಾಂಕ್, ಆಕಾಶ್ ಕೆ ದೇವಂಗ್ 980 ನೇ ಕೆಟಗರಿ ರ‍್ಯಾಂಕ್ ಪಡೆದಿದ್ದು ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಕೆ. ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್. ಪ್ರಶಾಂತ್ ಗೌಡ, ಆಡಳಿತ ಮಂಡಳಿ , ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಸಂಯೋಜಕರಾದ ರಕ್ಷಿತ್ ಬಿ. ಎಸ್ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Share