New CREST 2026 — Creative Entrance & Scholarship Test | I PUC 2027 Admissions Open | Top 100 Students Eligible for Scholarships Apply Now

ಯು.ಸಿ.ಇ.ಇ.ಡಿ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ ಸೂರಜ್ ಸುರೇಶ್ ರಾಷ್ಟ್ರಮಟ್ಟದಲ್ಲಿ 518 ನೇ ರ‍್ಯಾಂಕ್‌

ಯು.ಸಿ.ಇ.ಇ.ಡಿ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ ಸೂರಜ್ ಸುರೇಶ್ ರಾಷ್ಟ್ರಮಟ್ಟದಲ್ಲಿ 518 ನೇ ರ‍್ಯಾಂಕ್‌

ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಐಐಟಿ ಮುಂಬೈ , ಐಐಟಿ ದೆಹಲಿ, ಐಐಟಿ ಗುವಾಹಟಿ, ಐಐಟಿ ಹೈದರಾಬಾದ್, ಐಐಟಿ ರೂರ್ಕಿ ಮತ್ತು ಐಐಟಿ ಜಬಲಪುರ್ ಸಂಸ್ಥೆಗಳಿಗೆ ಬ್ಯಾಚುಲರ್ ಆಫ್ ಡಿಸೈನ್ ಕೋರ್ಸ್ ಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ 2026 ಜನವರಿ 18 ರಂದು ನಡೆದ ಯು.ಸಿ.ಇ.ಇ.ಡಿ (UCEED)ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸೂರಜ್ ಸುರೇಶ್ ರಾಷ್ಟ್ರಮಟ್ಟದಲ್ಲಿ ಜನರಲ್ ವಿಭಾಗದಲ್ಲಿ 518 ರ‍್ಯಾಂಕ್ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಭೂಮಿಕಾ ವೈ OBC- NCL ವಿಭಾಗದಲ್ಲಿ 1378 ನೇ ರ‍್ಯಾಂಕ್, ಸಂಕೀರ್ತ್ ರಾಜ್ ಕೆ. ಜಿ.1381ನೇ ರ‍್ಯಾಂಕ್ , ಚಿರಂತ್ ಕೆ.ಎನ್.OBC-NCL ವಿಭಾಗದಲ್ಲಿ 1507ನೇ ರ‍್ಯಾಂಕ್ ಪಡೆದುಕೊಂಡು ಮುಂದಿನ ಹಂತದ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಪರೀಕ್ಷಾ ಸಂಯೋಜಕರಾದ ಸುಮಂತ್ ದಾಮ್ಲೆ, ಉಪನ್ಯಾಸಕ ವರ್ಗದವರು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Share