New CREST 2026 — Creative Entrance & Scholarship Test | I PUC 2027 Admissions Open | Top 100 Students Eligible for Scholarships Apply Now

NIFT ಪರೀಕ್ಷೆಯಲ್ಲಿ ಹೆಚ್‌ ಕೆ ಎಸ್ ವಿದ್ಯಾರ್ಥಿಗಳ ಸಾಧನೆ.

NIFT ಪರೀಕ್ಷೆಯಲ್ಲಿ ಹೆಚ್‌ ಕೆ ಎಸ್ ವಿದ್ಯಾರ್ಥಿಗಳ ಸಾಧನೆ.

NIFT (National institute of fashion technology) ನಲ್ಲಿ ಬಿ ಡಿಸೈನ್ ಮತ್ತು ಬಿ ಫ್ಯಾಶನ್ ಟೆಕ್ನಾಲಜಿ ಕೋರ್ಸ್ ಗಳ ಪ್ರವೇಶಾತಿಗಾಗಿ ಜೂನ್ 8 ರಂದು ನಡೆದ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್‌ ಕೆ ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.

ದೇಶದ ಪ್ರತಿಷ್ಠಿತ NIFT ಕೇಂದ್ರಗಳಲ್ಲಿ ನಾಲ್ಕು ವರ್ಷದ ಡಿಸೈನ್ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆಯುವ ಅರ್ಹತಾ ಪರೀಕ್ಷೆ ಇದಾಗಿದ್ದು, ಫ್ಯಾಶನ್ ಡಿಸೈನ್, ಟೆಕ್ಸ್ ಟೈಲ್ ಡಿಸೈನ್, ಫ್ಯಾಷನ್ ಕಮ್ಯುನಿಕೇಷನ್ ಮುಂತಾದ ಬಹುಬೇಡಿಕೆಯುಳ್ಳ ಕೋರ್ಸ್ ಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.

ವಿದ್ಯಾರ್ಥಿಗಳಾದ ಚಿನ್ಮಯಿ ಆರ್ ಬಿ ಫ್ಯಾಶನ್ ಟೆಕ್ನಾಲಜಿ ವಿಷಯದಲ್ಲಿ ಕೆಟಗರಿ ವಿಭಾಗದಲ್ಲಿ 49ನೇ ರ‍್ಯಾಂಕ್ ಪಡೆದು ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉಳಿದಂತೆ ಬಿ ಡಿಸೈನ್ ವಿಷಯದಲ್ಲಿ ಕೆಟಗರಿ ವಿಭಾಗದಲ್ಲಿ ಪೂರ್ವಿಕ್ ಕೆ ಸಿ 190ನೇ ರ‍್ಯಾಂಕ್, ಸುಖಿ ಆರ್ ಗೌಡ 234ನೇ ರ‍್ಯಾಂಕ್, ಚಿನ್ಮಯ್ ಆರ್ 266ನೇ ರ‍್ಯಾಂಕ್, ರಂಗಲಕ್ಷ್ಮಿ 1257 ನೇ ರ‍್ಯಾಂಕ್, ಧಾಮಿನಿ ಹೆಚ್ ಎಸ್ 1563 ನೇ ರ‍್ಯಾಂಕ್ ಪಡೆದುಕೊಂಡಿರುತ್ತಾರೆ.

ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ , ಪ್ರಾಂಶುಪಾಲರು, ಸಂಯೋಜಕರಾದ ರಕ್ಷಿತ್ ಬಿ. ಎಸ್ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Share