New CREST 2026 — Creative Entrance & Scholarship Test | I PUC 2027 Admissions Open | Top 100 Students Eligible for Scholarships Apply Now

ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಹೆಚ್. ಕೆ. ಎಸ್ ನ ಅರ್ಜುನ್ ಇ ನಾಯಕ್ ಅದ್ಭುತ ಸಾಧನೆ.

ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಹೆಚ್. ಕೆ. ಎಸ್ ನ ಅರ್ಜುನ್ ಇ ನಾಯಕ್ ಅದ್ಭುತ ಸಾಧನೆ.

ದೇಶದ ಪ್ರತಿಷ್ಠಿತ IIT, IIST, IISc ಹೀಗೆ ಮುಂತಾದ ಸಂಸ್ಥೆಯಲ್ಲಿ ಬಿ.ಟೆಕ್ (B.Tech) ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ (JEE) ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಹಾಸನದ ಹೆಚ್.ಕೆ.ಎಸ್ ಪದವಿ ಪೂರ್ವ ಕಾಲೇಜಿನ ಅರ್ಜುನ್ ಇ ನಾಯಕ್ ರಾಷ್ಟ್ರಮಟ್ಟದಲ್ಲಿಯೇ 3298(category) ನೇ ರ‍್ಯಾಂಕ್‌ ಗಳಿಸಿ ವಿಶೇಷ ಸಾಧನೆ ಗೈದಿದ್ದಾರೆ.

ಈ ಮೂಲಕ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ. ಸಂಸ್ಥೆಯು ಸತತ ಐದು ವರ್ಷಗಳಿಂದಲೂ ಎಲ್ಲಾ ಸ್ಪರ್ಧಾತ್ಮಕ

ಪರೀಕ್ಷೆಗಳಿಗೂ ಉನ್ನತ ತರಬೇತಿಯನ್ನು ನೀಡುತ್ತಿರುವ ಹಾಸನದ ಏಕೈಕ ಪ್ರತಿಷ್ಠಿತ ಸಂಸ್ಥೆಯಾಗಿದೆ. ಹಿಂದಿನ ಎರಡು ವರ್ಷಗಳಿಂದಲೂ ಜೆ.ಇ.ಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ  ರ‍್ಯಾಂಕ್‌ಗಳೊಂದಿಗೆ ತೇರ್ಗಡೆ ಹೊಂದಿ ಹಾಸನ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್. ಪ್ರಶಾಂತ್ ಗೌಡ, ಆಡಳಿತ  ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ   ಆದಿತ್ಯ ವಟಿ ಕೆ ಹಾಗೂ ಎಲ್ಲಾ  ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Share