New CREST 2026 — Creative Entrance & Scholarship Test | I PUC 2027 Admissions Open | Top 100 Students Eligible for Scholarships Apply Now

ಜೆ.ಇ.ಇ ಬಿ. ಆರ್ಕಿಟೆಕ್ಚರ್ ಪ್ರವೇಶ ಪರೀಕ್ಷೆಯಲ್ಲಿ ಹೆಚ್. ಕೆ. ಎಸ್ ನ ದುರ್ಗಶ್ರೀ ಎಂ ಜಿಲ್ಲೆಗೆ ಪ್ರಥಮ

ಜೆ.ಇ.ಇ  ಬಿ. ಆರ್ಕಿಟೆಕ್ಚರ್ ಪ್ರವೇಶ ಪರೀಕ್ಷೆಯಲ್ಲಿ ಹೆಚ್. ಕೆ. ಎಸ್ ನ  ದುರ್ಗಶ್ರೀ ಎಂ ಜಿಲ್ಲೆಗೆ ಪ್ರಥಮ

ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ, ಮತ್ತು ಇತರ ಆರ್ಕಿಟೆಕ್ಚರ್ ಕಾಲೇಜುಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಜನವರಿ  24 ರಂದು ನಡೆದ ಜೆ.ಇ.ಇ   ಬಿ. ಆರ್ಕಿಟೆಕ್ಚರ್ ಪ್ರವೇಶ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್. ಕೆ. ಎಸ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು  ಕ್ರಿಯೇಟಿವ್ ಲರ್ನಿಂಗ್ ಕ್ಲಾಸಸ್’ನ ಅಡಿಯಲ್ಲಿ   ತರಬೇತಿಯನ್ನು ಪಡೆದು ದುರ್ಗಶ್ರೀ ಎಂ  ಪ್ರಥಮ ಪ್ರಯತ್ನದಲ್ಲೇ  99.1312779 ಅಂಕಗಳನ್ನು ಪಡೆದು ಅದ್ಭುತ ಸಾಧನೆ ಗೈದಿದ್ದಾರೆ. ಉಳಿದಂತೆ ಕಾಲೇಜಿನ ವಿದ್ಯಾರ್ಥಿಗಳಾದ  ಪವನ್ ಕೆ ಎಸ್ 96.1256545,

ಜುಮಾನ ರಾನಿಯ 87.382199, ಪ್ರತಿಕ್ಷ ಪ್ರಕಾಶ್ ಗೌಡ 84.9486135

ಅಂಕಗಳೊಂದಿಗೆ ಅತ್ಯಧಿಕ  ಪರ್ಸಂಟೈಲ್ ಪಡೆದುಕೊಂಡಿದ್ದು, ಮುಂದಿನ ಹಂತದ ಐ. ಐ .ಟಿ ಗಳಲ್ಲಿ ಆರ್ಕಿಟೆಕ್ಚರ್ ಕೋರ್ಸ್ ಮಾಡಲು ನಡೆಸುವ ಆರ್ಕಿಟೆಕ್ಚರ್ ಆಪ್ಟಿಟ್ಯೂಡ್ ಟೆಸ್ಟ್ (AAT) ಗೆ  ಅರ್ಹತೆ ಪಡೆದುಕೊಂಡಿದ್ದಾರೆ. ಪ್ರಸ್ತುತ ಬಹುಬೇಡಿಕೆಯುಳ್ಳ ಈ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಗೆ  ಹೆಚ್. ಕೆ. ಎಸ್ ವಿದ್ಯಾ ಸಂಸ್ಥೆಯು ಕ್ರಿಯೇಟಿವ್ ಲರ್ನಿಂಗ್ ಕ್ಲಾಸಸ್ ನ ಅಡಿಯಲ್ಲಿ ಅತ್ಯುತ್ತಮ  ತರಬೇತಿ ನೀಡುತ್ತಿದ್ದು, ಜೆ.ಇ.ಇ ಮೈನ್ಸ್ ಮತ್ತು ಅಡ್ವಾನ್ಸ್ಡ್ ಗೆ ತರಬೇತಿ ನೀಡುತ್ತಿರುವ ಹಾಸನ ಜಿಲ್ಲೆಯ ಪ್ರಮುಖ ಸಂಸ್ಥೆಯಾಗಿದೆ.ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್.ಪ್ರಶಾಂತ್ ಗೌಡ, ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ  ರಕ್ಷಿತ್ ಬಿ ಎಸ್  ಹಾಗೂ  ಎಲ್ಲಾ  ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Share