New CREST 2026 — Creative Entrance & Scholarship Test | I PUC 2027 Admissions Open | Top 100 Students Eligible for Scholarships Apply Now

ಯೋಗ ಸ್ಪರ್ಧೆ : ಕ್ರಿಯೇಟಿವ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಯೋಗ ಸ್ಪರ್ಧೆ : ಕ್ರಿಯೇಟಿವ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಜಿಲ್ಲಾಮಟ್ಟದ ಯೋಗ ಸ್ಪರ್ಧೆಯು ಉಡುಪಿಯ ವಿದ್ಯೋದಯ ಪಿ.ಯು ಕಾಲೇಜಿನಲ್ಲಿ 7-11-2025ರಂದು ಜರುಗಿತು. ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅರ್ಥಮ್ ಎ. ಶೆಟ್ಟಿ ಹಾಗೂ ರಕ್ಷಕ್ ಎಸ್. ಗೌಡ ಇವರು ಕಲಾತ್ಮಕ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಸಾಂಪ್ರದಾಯಿಕ ಯೋಗ ಸ್ಪರ್ಧೆಯಲ್ಲಿ ಜಾಹ್ನವಿ ಜೆ. ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಹಾಗೂ ಅರ್ಥಮ್ ಎ. ಶೆಟ್ಟಿ ರವರು ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ವಿಜೇತರಾಗಿದ್ದಾರೆ.

ಪ್ರಥಮ ಸ್ಥಾನಿಗಳಾದ ಅರ್ಥಮ್ ಎ. ಶೆಟ್ಟಿ ಹಾಗೂ ರಕ್ಷಕ್ ಎಸ್. ಗೌಡರವರು ಹಾವೇರಿಯಲ್ಲಿ ನಡೆಯುವ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಬೋಧಕ – ಬೋಧಕೇತರ ವರ್ಗದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.

Share