New CREST 2026 — Creative Entrance & Scholarship Test | I PUC 2027 Admissions Open | Top 100 Students Eligible for Scholarships Apply Now

ಹಾಸನ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಹೆಚ್.ಕೆ.ಎಸ್ ನ ಅದ್ಭುತ ಸಾಧನೆ.

ಹಾಸನ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಹೆಚ್.ಕೆ.ಎಸ್ ನ ಅದ್ಭುತ ಸಾಧನೆ.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಚ್.ಕೆ. ಎಸ್ ಪಿ ಯು ಕಾಲೇಜು ಹಾಸನ. ದಿನಾಂಕ 22.11.2024ನೇ ಶುಕ್ರವಾರದಂದು ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ 2024- 25ನೇ ಶೈಕ್ಷಣಿಕ ಸಾಲಿನ ಜಿಲ್ಲಾಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹಲವು ಬಹುಮಾನ ಪಡೆದುಕೊಂಡಿದೆ.

ಅಕ್ಷರ ಸಿ ಎಲ್ ಚರ್ಚಾ ಸ್ಪರ್ಧೆ (ಆಂಗ್ಲ) ಪ್ರಥಮ, ಗೌತಮ್ ಸಿ ವೈ ಚರ್ಚಾ ಸ್ಪರ್ಧೆ (ಆಂಗ್ಲ) ದ್ವಿತೀಯ, ಧನ್ಯಶ್ರೀ ಕೆ.ಎಸ್ ಭಕ್ತಿಗೀತೆ ಪ್ರಥಮ ಹಾಗೂ ಭಾವಗೀತೆ ದ್ವಿತೀಯ, ಸ್ವರೂಪ ಆಶುಭಾಷಣ ಪ್ರಥಮ, ಕೊಂಡಪರ್ತಿ ಅರ್ಜುನ್ ಮತ್ತು ಟಿ ಆರ್ ರೇವಂತ್ ರಸಪ್ರಶ್ನೆ ದ್ವಿತೀಯ, ನಿತಿನ್ ಗೌಡ ಕೆ  ಏಕಪಾತ್ರಾಭಿನಯ ದ್ವಿತೀಯ, ಯಶಸ್ ಪ್ರಬಂಧ (ಆಂಗ್ಲ) ತೃತೀಯ ಬಹುಮಾನವನ್ನು ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಅದ್ಭುತ ಸಾಧನೆಗೈದಿದ್ದಾರೆ.

ವಿಜೇತರನ್ನು  ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಕೆ.ಸುರೇಶ್, ಕಾರ್ಯದರ್ಶಿಗಳಾದ ಶ್ರೀಯುತ ಹೆಚ್.ಎಸ್.ಪ್ರಶಾಂತ್ ಗೌಡ, ಆಡಳಿತ  ಮಂಡಳಿ, ಪ್ರಾಂಶುಪಾಲರು  ಹಾಗೂ ಎಲ್ಲಾ  ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Share