New CREST 2026 — Creative Entrance & Scholarship Test | I PUC 2027 Admissions Open | Top 100 Students Eligible for Scholarships Apply Now

ಹೆಚ್ ಕೆ ಎಸ್ ಪಿಯು ಕಾಲೇಜಿನಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವೈಭವದ ಕ್ರಿಯೇಟಿವ್ ನುಡಿಹಬ್ಬ ಕಾರ್ಯಕ್ರಮ

ಹೆಚ್ ಕೆ ಎಸ್ ಪಿಯು ಕಾಲೇಜಿನಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವೈಭವದ ಕ್ರಿಯೇಟಿವ್ ನುಡಿಹಬ್ಬ ಕಾರ್ಯಕ್ರಮ

ದಿನಾಂಕ:05-11-2025 ರಂದು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೆಚ್ ಕೆ ಎಸ್ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಕ್ರಿಯೇಟಿವ್ ನುಡಿ ಹಬ್ಬ-2025’ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಶ್ರೀ ಅಶ್ವತ್ ಎಸ್ ಎಲ್ ಅವರು ಡಾ. ನಾ ಸೋಮೇಶ್ವರರ ಸಾಹಿತ್ಯದ ಚಿಂತನೆ, ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಣೆಯ ವೈಶಿಷ್ಟ್ಯತೆಯ ಕುರಿತು ಮಾತನಾಡುತ್ತಾ ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ, ಕನ್ನಡ ಸಾಹಿತ್ಯಕ್ಕೆ ಕವಿಗಳ ಕೊಡುಗೆ ಅಪಾರ, ಸಾಹಿತ್ಯದ ಕುರಿತಂತೆ ಕ್ರಿಯೇಟಿವ್ ಸಂಸ್ಥೆ ಪುಸ್ತಕ ಮನೆ ವತಿಯಿಂದ ಸಾಹಿತ್ಯದ ಪುಸ್ತಕಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡುತ್ತಿದ್ದೇವೆ ಎನ್ನುತ್ತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ ವೈದ್ಯರು, ಕ್ವಿಜ್ ಮಾಸ್ಟರ್, ಲೇಖಕರು, ಅಂಕಣಕಾರರಾದ ಡಾ. ನಾ ಸೋಮೇಶ್ವರ ಅವರು ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ಕಲಿಸುವುದು ಎಲ್ಲ ತಂದೆ ತಾಯಿಯರ ಕರ್ತವ್ಯ, ಪ್ರಕೃತಿಯಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ತಿಳಿಸುತ್ತಾ ಮನುಕುಲದ ಉಗಮ, ಕನ್ನಡ ಭಾಷೆಯ ಉಗಮ, ಕನ್ನಡ ಭಾಷೆಯ ಪ್ರಾಚೀನತೆ, ಕನ್ನಡ ಭಾಷೆ ಮೂರನೇ ಶತಮಾನದ ಹೊತ್ತಿಗೆ ಸ್ವತಂತ್ರ ಭಾಷೆಯಾಗಿತ್ತು, ಕನ್ನಡಿಗರ ಇತಿಹಾಸ ಸಿಂಧೂ, ಸರಸ್ವತಿ ನದಿಯಷ್ಟೇ ಐತಿಹ್ಯ ಹೊಂದಿದೆ. ಕನ್ನಡ ನಾಡನ್ನು ಕಪ್ಪು ನಾಡು, ಕರುನಾಡು, ಕಮ್ಮಿತ್ತು ನಾಡು, ಸೊಗಸಾದ ನಾಡು ಎಂದು ಸೊಗಸುಗಾರಿಕೆಯನ್ನು ವರ್ಣಿಸುತ್ತಾ ಹೊಟ್ಟೆಪಾಡಿಗಾಗಿ ಅನ್ನಕ್ಕಾಗಿ ಯಾವ ಭಾಷೆಯನ್ನಾದರು ಕಲಿಯಿರಿ ಆದರೆ ಕನ್ನಡ ನಮ್ಮ ಮಾತೃಭಾಷೆ ಎಂದಿಗೂ ಮರೆಯಬೇಡಿ ಎಂದು ಮಕ್ಕಳಿಗೆ ಕಿವಿ ಮಾತುಗಳನ್ನು ಹೇಳಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀ ವಿಮಲ್ ರಾಜ್ ಜಿ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಹೆಚ್‌ ಕೆ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ಹೆಚ್ ಎಸ್ ಪ್ರಶಾಂತ್ ಗೌಡ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರವೀಣ್ ಎ ಅವರು ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿ ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹಾಗೂ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕರಾದ ಲೋಕೇಶ್ ಪೂಜಾರಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ರಮೇಶ್ ಎಂ ನಿರೂಪಿಸಿದರೆ, ಆಂಗ್ಲ ಉಪನ್ಯಾಸಕರಾದ ಶ್ರೀನಿವಾಸ್ ಜೆ ಎನ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Share