New CREST 2026 — Creative Entrance & Scholarship Test | I PUC 2027 Admissions Open | Top 100 Students Eligible for Scholarships Apply Now

ಹೆಚ್ .ಕೆ .ಎಸ್ ಪಿ ಯು ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಮತ್ತು ಡಿಸೈನ್ ಕೋರ್ಸುಗಳ ಮಾಹಿತಿ ಕಾರ್ಯಗಾರ.

ಹೆಚ್ .ಕೆ .ಎಸ್ ಪಿ ಯು ಕಾಲೇಜಿನಲ್ಲಿ ಆರ್ಕಿಟೆಕ್ಚರ್ ಮತ್ತು ಡಿಸೈನ್ ಕೋರ್ಸುಗಳ ಮಾಹಿತಿ ಕಾರ್ಯಗಾರ.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ  ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದೊಂದಿಗೆ ಕಾರ್ಯಾಚರಿಸುತ್ತಿರುವ ಹಾಸನದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಹೆಚ್.ಕೆ.ಎಸ್ ಪಿ ಯು ಕಾಲೇಜು ಹಾಸನ ಇಲ್ಲಿ ಆರ್ಕಿಟೆಕ್ಚರ್ (NATA) ಪ್ರವೇಶ ಪರೀಕ್ಷೆ ಮತ್ತು ಡಿಸೈನ್ ಕೋರ್ಸ್ ಗಳ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಡಿಸೈನ್ ವೆನ್ಯೂ ಸಂಸ್ಥೆಯ ಸ್ಥಾಪಕರಾದ ಆರ್ಕಿಟೆಕ್ಟ್ ಶ್ರೀ ಚಂದ್ರಶೇಖರ್ ಅವರು ಆರ್ಕಿಟೆಕ್ಚರ್(NATA) ಪ್ರವೇಶ ಪರೀಕ್ಷೆ ಮತ್ತು ಡಿಸೈನ್ ಕೋರ್ಸುಗಳಾದ ಎನ್ ಐ ಎಫ್ ಟಿ, ಎನ್ ಐ ಡಿ,  ಯು ಸಿ ಇ ಇ ಡಿ ಪರೀಕ್ಷೆಗಳ ಕುರಿತು ಆನ್ಲೈನ್ ಮುಖಾಂತರ ಸಂಪೂರ್ಣ ಮಾಹಿತಿ ನೀಡಿದರು. ಉಪಪ್ರಾಂಶುಪಾಲರಾದ ಆದಿತ್ಯ ವಟಿ ಕೆ ಅವರು ಕಾರ್ಯಕ್ರಮದ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ನಾಟ ಪ್ರವೇಶ ಪರೀಕ್ಷೆಯ ಸಂಪೂರ್ಣ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಶ್ರೀ ಆದಿತ್ಯ ವಟಿ ಕೆ , ನಾಟ ಸಂಯೋಜಕರಾದ ರಕ್ಷಿತ್ ಬಿ.ಎಸ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು  ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Share