New CREST 2026 — Creative Entrance & Scholarship Test | I PUC 2027 Admissions Open | Top 100 Students Eligible for Scholarships Apply Now

ಕ್ರಿಯೇಟಿವ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ : ಶಿಕ್ಷಕ ವೃತ್ತಿ ಪರಮ ಪವಿತ್ರವಾದದ್ದು, ಗುರುತ್ವದೆಡೆಗೆ ಕರೆದೊಯ್ಯುವುದೇ ವಿದ್ಯೆ – ಪ್ರೊ.ಬಿ.ಪದ್ಮನಾಭಗೌಡ

ಕ್ರಿಯೇಟಿವ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ : ಶಿಕ್ಷಕ ವೃತ್ತಿ ಪರಮ ಪವಿತ್ರವಾದದ್ದು, ಗುರುತ್ವದೆಡೆಗೆ ಕರೆದೊಯ್ಯುವುದೇ ವಿದ್ಯೆ – ಪ್ರೊ.ಬಿ.ಪದ್ಮನಾಭಗೌಡ

ಶಿಕ್ಷಕ ಮತ್ತು ಶಿಕ್ಷಕ ವೃತ್ತಿಗಳು ಅತ್ಯಂತ ಶ್ರೇಷ್ಠವಾದದ್ದು ವಿದ್ಯಾರ್ಥಿಗಳಲ್ಲಿ ಸದ್ಭಾವನೆಯನ್ನು ಬೆಳೆಸುತ್ತಾ, ಶಿಕ್ಷಕನೂ ಅಧ್ಯಯನಶೀಲನಾಗಬೇಕು. ನಿರಂತರವಾಗಿ ಗುರುತರವಾದ ಜವಾಬ್ದಾರಿಯಿಂದ ಬೋಧನೆ ಮಾಡುವವರಾಗಬೇಕು ಎಂದು ಪ್ರೊ.ಬಿ.ಪದ್ಮನಾಭ ಗೌಡ ಕರೆನೀಡಿದರು. ಅವರು ಕಾರ್ಕಳದ ಕ್ರಿಯೇಟಿವ್ ಪ. ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನದ ಪ್ರಯುಕ್ತ ಆಚರಿಸಲಾದ ‘ಗುರುದೇವೋ ಭವ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿ ಚೇತನಾ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಶೆಟ್ಟಿ ಮಾತನಾಡಿ ಗುರುಗಳೆಂದರೆ ಅಪಾರ ಗೌರವದಿಂದ ಕಾಣಬೇಕಾದ ವ್ಯಕ್ತಿ, ಅಂತಹ ವ್ಯಕ್ತಿತ್ವಕ್ಕೆ ಜಗತ್ತಿನಲ್ಲಿ ಅಪೂರ್ವ ಮನ್ನಣೆಯಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದಿ ಉಪನ್ಯಾಸಕ ವಿನಾಯಕ ಜೋಗ್ ಹಾಗೂ ಜೀವಶಾಸ್ತ್ರ ಉಪನ್ಯಾಸಕ ಆದಂ ಶೇಕ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಸಂಸ್ಥೆಯ ಉಪನ್ಯಾಸಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸಂಸ್ಥೆಯ ಆದರ್ಶ ಮತ್ತು ಕನಸನ್ನು ಹಂಚಿಕೊಂಡರು. ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ ಎಂ.ಕೆ, ವಿಮಲ್ ರಾಜ್ ಜಿ, ಗಣಪತಿ ಭಟ್ ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಾಮಕೃಷ್ಣ ಹೆಗಡೆ ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Share