New CREST 2026 — Creative Entrance & Scholarship Test | I PUC 2027 Admissions Open | Top 100 Students Eligible for Scholarships Apply Now

ಕಾರ್ಕಳ: ಪಿಯುಸಿ ಫಲಿತಾಂಶ : ಕ್ರಿಯೇಟಿವ್ ಸಾರ್ವತ್ರಿಕ ದಾಖಲೆ ಸತತ ನಾಲ್ಕನೇ ವರ್ಷವೂ ಶೇಕಡಾ 100 ಫಲಿತಾಂಶ

ಕಾರ್ಕಳ: ಪಿಯುಸಿ ಫಲಿತಾಂಶ : ಕ್ರಿಯೇಟಿವ್ ಸಾರ್ವತ್ರಿಕ ದಾಖಲೆ  ಸತತ ನಾಲ್ಕನೇ ವರ್ಷವೂ ಶೇಕಡಾ 100 ಫಲಿತಾಂಶ

2024-25ನೇ ಶೇಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಸತತ 4ನೇ ವರ್ಷವೂ ಶೇಖಡಾ 100 ಫಲಿತಾಂಶದೊAದಿಗೆ ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ. ಪರೀಕ್ಷೆ ಬರೆದ ಎಲ್ಲಾ 692 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೇ ತೇರ್ಗಡೆ ಹೊಂದುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಮೇಘನಾ ಯು. ವೈ 594 ಅಂಕಗಳೊAದಿಗೆ ರಾಜ್ಯಕ್ಕೆ 6ನೇ ಸ್ಥಾನ, ಅಮೃತ ಬಸವರಾಜ್ ಬಣಕಾರ್ 592 ಅಂಕಗಳೊAದಿಗೆ ರಾಜ್ಯಕ್ಕೆ 8ನೇ ಸ್ಥಾನ, ಶ್ರೀನಿಧಿ ಡಿ 591 ಅಂಕಗಳೊAದಿಗೆ ರಾಜ್ಯಕ್ಕೆ 9ನೇ ಸ್ಥಾನ, ಪ್ರಜ್ವಲ್ ಎಸ್. ಎನ್ 590 ಅಂಕಗಳೊAದಿಗೆ ರಾಜ್ಯಕ್ಕೆ 10ನೇ ಸ್ಥಾನ, ತೇಜಸ್ ವಿ. ನಾಯಕ್ 590 ಅಂಕಗಳೊAದಿಗೆ ರಾಜ್ಯಕ್ಕೆ 10ನೇ ಸ್ಥಾನ ಗಳಿಸಿದ್ದಾರೆ. ಒಟ್ಟು ಪರೀಕ್ಷೆಗೆ ಹಾಜರಾದ 692 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು 97% ಕ್ಕಿಂತ ಅಧಿಕ, 168 ವಿದ್ಯಾರ್ಥಿಗಳು 95%ಕ್ಕಿಂತ ಅಧಿಕ, 379 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ, ಹಾಗೂ 557 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.
ಭೌತಶಾಸ್ತçದಲ್ಲಿ 07, ರಸಾಯನಶಾಸ್ತç 15, ಗಣಿತ 101, ಜೀವಶಾಸ್ತç 22, ಗಣಕ ವಿಜ್ಞಾನ 26, ಅರ್ಥಶಾಸ್ತç 02, ವ್ಯವಹಾರ ಅಧ್ಯಯನ 12, ಲೆಕ್ಕಶಾಸ್ತç 02, ಕನ್ನಡ 09, ಸಂಸ್ಕೃತ 76 ಹಾಗೂ ಹಿಂದಿಯಲ್ಲಿ 05 ವಿದ್ಯಾರ್ಥಿಗಳು ವಿಷಯವಾರು ನೂರಕ್ಕೆ ನೂರು ಅಂಕಗಳಿಸಿ ವಿಶೇಷ ಸಾಧನೆಗೈದಿದ್ದಾರೆ.
ಸಂಸ್ಥೆ ಪ್ರಾರಂಭವಾದ ಮೊದಲ ವರ್ಷದಿಂದಲೂ ಶೇಕಡಾ 100 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ವೃಂದದವರು ಸಂತಸ ವ್ಯಕ್ತಪಡಿಸಿ, ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Share